ಇರಾಸ್ಮಸ್, ಅಲ್ಬೆರಸ್
 	1500-1553. ಮಾರ್ಟಿನ್ ಲೂಥರನ ಬೆಂಬಲಿಗ. ಫ್ರಾಂಕ್ ಫರ್ಟ್ ನಗರದ ಹತ್ತಿರದ ಸ್ಥಳವಾದ ಸ್ಟ್ರೆಂಡ್ ಅಂಗೆನ್ ಎಂಬಲ್ಲಿ ಜನಿಸಿದ. ಈತನ ಬರೆವಣಿಗೆ ಕೆಥೋಲಿಕ್ ಪಂಥದ ಅವಹೇಳನವನ್ನೂ ಪ್ರಾಟೆಸ್ಟಂಟ್ ಪಂಥದ ಹೆಚ್ಚಳವನ್ನೂ ಕುರಿತದ್ದಾಗಿದೆ. ಈ ಬಗೆಯ ಬರೆವಣಿಗೆ ಅಡಗೂಲಜ್ಜಿ ಕಥೆಗಳನ್ನು ಹೋಲುವಂಥದು. 1550ರಲ್ಲಿ ಪ್ರಕಟವಾದ ಧರ್ಮ ಮತ್ತು e್ಞÁನವನ್ನು ಕುರಿತ ಗ್ರಂಥ (ಆಚಿs ಃuಛಿh ಗಿoಟಿ ಖಿugeಟಿಜ ಚಿಟಿಜ Weisheiಣ) ಕೆಥೋಲಿಕ್ ಪಂಥವನ್ನು ವಿಡಂಬನಾತ್ಮಕವಾಗಿ ಟೀಕಿಸುವ ಕಥಾನಕಗಳನ್ನೊಳಗೊಂಡಿದೆ. ಇದಕ್ಕೂ ಮುಂಚಿತವಾಗಿ, 1542ರಲ್ಲಿ ಕ್ರಿಯಾಪ್ರಹಸನ ಮತ್ತು ಅಲ್ ಕೊರಾನ್ (ಇಟಿಟeಟಿsಠಿiegeಟ ಚಿಟಿಜ ಂಟಛಿoಡಿಟಿ) ಎಂಬ ಹೊತ್ತಗೆಯಲ್ಲಿ ರೋಮನ್ ಕೆಥೋಲಿಕರು ನಡೆಸುವ ಸಂತರ ಪೂಜೆಯನ್ನು ಈತ ಖಂಡಿಸಿದ್ದಾನೆ. ಈ ಹೊತ್ತಿಗೆ ಗಮನಾರ್ಹವಾದುದು. ಏಕೆಂದರೆ, ಈ ಹೊತ್ತಗೆಗೆ ಮುನ್ನುಡಿಯನ್ನು ಸ್ವತಃ ಮಾರ್ಟಿನ್ ಲೂಥರನೇ ಬರೆದಿದ್ದಾನೆ.        

 (ಕೆ.ಕೆ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ